27 ನಕ್ಷತ್ರಗಳ ಹೆಸರುಗಳು – ನಿಮ್ಮ ಭವಿಷ್ಯದ ಬಗ್ಗೆ ತಿಳಿಯಿರಿ
ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳ ಹೆಸರುಗಳು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ನಮೂದಿಸಲಾಗಿದೆ ಇತ್ತೀಚಿಗೆ ನಾವೆಲ್ಲ ನೋಡಿಕೊಂಡು ಬರುತ್ತಿರುವ ನಕ್ಷತ್ರಗಳು ಹಾಗೂ ನಿಮ್ಮ ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ನಾವೀಗ ತಿಳಿಯೋಣ ಬನ್ನಿ.
ನಕ್ಷತ್ರಗಳು ಎಂದರೇನು?
ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರ ಎಂದರೆ ಚಂದ್ರನ ಸ್ಥಳ ಬದಲಾಗುತ್ತಾ ಇರುತ್ತೆ ಅದಕ್ಕೆ ಬಳಸುವ ಪದವಾಗಿದೆ ನಮ್ಮ ಚಂದ್ರನು ಚಲಿಸುವಾಗ ಪ್ರತಿಯೊಂದು ನಕ್ಷತ್ರದಲ್ಲಿಯೂ ನೆಲೆ ಬೀಡುತ್ತಾನೆ ಅದಕ್ಕೆ ಭಾವಗಳೆಂದು ಕರೆಯುತ್ತೇವೆ. ನಮ್ಮ ಹಿಂದೂಗಳ ಪುರಾಣದಲ್ಲಿ ನಕ್ಷತ್ರಗಳ ಗ್ರಹಣದ ಉದ್ದಕ್ಕೂ ಒಟ್ಟು 27 ಸ್ಥಾನಗಳಿರುತ್ತವೆ ಒಂದೊಂದು ಸ್ಥಾನಕ್ಕೂ ನಕ್ಷತ್ರಗಳೆಂದು ಕರೆಯುತ್ತಾರೆ ಎಲ್ಲಾ ನಕ್ಷತ್ರಗಳ ಸ್ಥಾನವನ್ನು ಸೂರ್ಯ ಅಧಿಪತಿಯಾಗಿ ಕಾಯುತ್ತಿದ್ದಾನೆ.
ಈ ಕೆಳಗೆ ನಾವು ಎಲ್ಲಾ 27 ನಕ್ಷತ್ರಗಳ ಹೆಸರುಗಳು ನೀಡಿದ್ದೇವೆ
ಅಶ್ವಿನಿ ನಕ್ಷತ್ರ
ರೋಹಿಣಿ ನಕ್ಷತ್ರ
ಪುನರ್ವಸು ನಕ್ಷತ್ರ
ಪೂರ್ವ ಫಲ್ಗುಣಿ ನಕ್ಷತ್ರ
ಚಿತ್ರಾ ನಕ್ಷತ್ರ
ಅನುರಾಧಾ ನಕ್ಷತ್ರ
ಪೂರ್ವ ಆಷಾಢ ನಕ್ಷತ್ರ
ಧನಿಷ್ಠಾ ನಕ್ಷತ್ರ
ರೇವತಿ ನಕ್ಷತ್ರ
ಕೃತ್ತಿಕಾ ನಕ್ಷತ್ರ
ಆರ್ದ್ರಾ ನಕ್ಷತ್ರ
ಆಶ್ಲೇಷಾ ನಕ್ಷತ್ರ
ಹಸ್ತಾ ನಕ್ಷತ್ರ
ವಿಶಾಖ ನಕ್ಷತ್ರ
ಮೂಲಾ ನಕ್ಷತ್ರ
ಶ್ರವಣ ನಕ್ಷತ್ರ
ಉತ್ತರ ಭಾದ್ರಪದ ನಕ್ಷತ್ರ
ಮಾಘ ನಕ್ಷತ್ರ
ಭರಣಿ ನಕ್ಷತ್ರ
ಮೃಗಶಿರ ನಕ್ಷತ್ರ
ಪುಷ್ಯ ನಕ್ಷತ್ರ
ಉತ್ತರ ಫಾಲ್ಗುಣಿ ನಕ್ಷತ್ರ
ಸ್ವಾತಿ ನಕ್ಷತ್ರ
ಜ್ಯೇಷ್ಟ ನಕ್ಷತ್ರ
ಉತ್ತರ ಆಷಾಢ ನಕ್ಷತ್ರ
ಶತಬಿಷಕ ನಕ್ಷತ್ರ
ಪೂರ್ವ ಭಾದ್ರಪದ ನಕ್ಷತ್ರ
ಅಶ್ವಿನಿ ನಕ್ಷತ್ರದ ಹೆಸರುಗಳು
ಅಶ್ವಿನಿ ನಕ್ಷತ್ರದ ರಾಶಿ ಚಕ್ರಾ ಚಿಹ್ನೆ ಮೇಷ ರಾಶಿಯಾಗಿದೆ ಲಿಂಗವನ್ನು ಪುರುಷ ಎಂದು ನಮೂದಿಸಲಾಗುತ್ತೆ ಈ ನಕ್ಷತ್ರದ ಆಡಳಿತ ಗ್ರಹ ಕೇತು ದೇವತೆಗಳು ಆಕಾಶ ದೇವತೆಗಳಾಗಿದ್ದಾರೆ ಗುಣಮಟ್ಟವನ್ನ ಕುದುರೆ ಸೌಂದರ್ಯ ಹಾಗೂ ಆರೋಗ್ಯದ ಸಂಕೇತವಾಗಿದೆ ಯೂನಿಕೂಟವನ್ನ ಕುದುರೆ ಎಂದು ತಿಳಿಸಲಾಗುತ್ತೆ ಕೆಂಪು ಪ್ರಸಿದ್ಧ ಬಣ್ಣ ವಾಗಿರುತ್ತೆ ಈ ರಾಶಿಯವರ ನೆಚ್ಚಿನ ಪಕ್ಷಿ ಗರುಡ, ನೆಚ್ಚಿನ ಪ್ರಾಣಿ ಗಂಡು ಕುದುರೆ ಎಂದು ಹೇಳಲಾಗುತ್ತೆ.ನಮ್ಮ ಜ್ಯೋತಿಷ್ಯದಲ್ಲಿ ಕೇತು ಗ್ರಹವನ್ನ ಆಡಳಿತ ಮಾಡುವ ಗ್ರಹ ಎಂದು ಕರೆಯಲಾಗುತ್ತೆ ಇದು ಕುದುರೆ ತಲೆಯಂತೆ ಕಾಣುತ್ತೆ ಹಾಗಾಗಿ ಈ ನಕ್ಷತ್ರವನ್ನು ಹೊಂದಿರುವವರು ಉತ್ತಮ ಶಿಕ್ಷಣ ಹಾಗೂ ಆದಾಯ ಜೊತೆಗೆ ಒಳ್ಳೆಯ ಕೌಟುಂಬಿಕ ಜೀವನ ನಡೆಸುತ್ತಾರೆ ಎಂಬ ಭವಿಷ್ಯವಾಣಿಯನ್ನು ಹೇಳಬಹುದಾಗಿದೆ.
ಭರಣಿ ನಕ್ಷತ್ರದ ಹೆಸರುಗಳು
ಭರಣಿ ನಕ್ಷತ್ರದ ಪುರುಷ ಹಾಗೂ ಮಹಿಳೆಯರ ಗುಣಲಕ್ಷಣಗಳು ಹೀಗಿವೆ ರಾಶಿ ಚಕ್ರಾ ಚಿಹ್ನೆ ಮೇಷ, ರಾಶಿ ಲಿಂಗ ಹೆಣ್ಣು, ದೇವತೆ ಸಾವಿನ ದೇವರು ಯಮ ಚರಣ ರಾಶಿ ಸಿಂಹ ಹಾಗೂ ವೃಶ್ಚಿಕ, ಗುಣಮಟ್ಟ ಸಮತೋಲಿತ ಚಿನ್ಹೆ ಯೋನಿ ಆಗಿದೆ, ಮನುಷ್ಯ ಗಣವನ್ನ ಹೊಂದಿದ್ದಾರೆ ಇವರಿಗೆ ಇಷ್ಟವಾದ ಬಣ್ಣ ರಕ್ತ ಕೆಂಪು, ಆನೆ ಇವರ ಇಷ್ಟ ಪ್ರಾಣಿ, ಕಾಗೆ ಪಕ್ಷಿಯಾಗಿರುತ್ತೆ ಆಗಿರುತ್ತದೆ. ನೀವೇನಾದರೂ ಭರಣಿ ನಕ್ಷತ್ರದಲ್ಲಿ ಜನಿಸಿದ್ದರೆ ಅದರಿಂದ ನಿಮ್ಮ ಮೇಲೆ ಹಲವು ವಿಧದ ಪರಿಣಾಮವನ್ನು ಬೀರುತ್ತದೆ ತುಂಬಾ ದೊಡ್ಡ ಹೃದಯವಂತಿಕೆ ಇಟ್ಟುಕೊಂಡಿರುತ್ತೀರಿ ಹಲವು ಜನರು ನಿಮ್ಮನ್ನ ತೊಂದರೆಗೆ ಒಳಪಡಿಸಲು ಪ್ರಯತ್ನಿಸುತ್ತಾರೆ ಅಂತವರಿಗೆ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ ಆಕರ್ಷಕ ಕಣ್ಣುಗಳನ್ನ ಹೊಂದಿದ್ದೀರಿ ಹಾಗಾಗಿ ಯಾವುದೇ ಕೆಲಸ ಮಾಡುವಾಗ ತುಂಬಾ ಮುತುವರ್ಜಿಯಿಂದ ಸಾಕಷ್ಟು ಬಾರಿ ನೋಡಿ ಕೆಲಸ ಮುಂದುವರಿಸುತ್ತೇನೆ ಹಾಗಾಗಿ ಯಾವುದೇ ರೀತಿಯ ತೊಂದರೆಗಳಿಗೆ ನೀವು ಒಳಗಾಗುವುದಿಲ್ಲ. ಸಾಕಷ್ಟು ದೊಡ್ಡ ಕೆಲಸಗಳನ್ನು ಮಾಡಬೇಕು ಎಂಬ ಆಸೆಯಿಂದ ಕೆಲಸವನ್ನ ಆರಂಭಿಸುತ್ತೀರಾ ಆದರೆ ಕೆಲವೇ ದಿನಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡು ಆ ಕೆಲಸದ ಬಗ್ಗೆ ಗಮನ ಹರಿಸುವುದಿಲ್ಲ ಈ ಕಾರಣಕ್ಕಾಗಿಯೇ ನಿಮ್ಮ ಜೀವನದಲ್ಲಿ ನೀವು ಬೆಳವಣಿಗೆಯನ್ನು ಹೊಂದಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಯಾವುದೇ ಕೆಲಸ ಪ್ರಾರಂಭಿಸುವ ಮುಂಚೆ ಆತ್ಮವಿಶ್ವಾಸವನ್ನ ಬೆಳೆಸಿಕೊಳ್ಳಿ ನಿಮ್ಮ ಆತ್ಮಸಾಕ್ಷಿಯ ವಿರುದ್ಧವಾಗಿ ಯಾವುದೇ ತಪ್ಪು ಕೆಲಸವನ್ನು ಮಾಡಬೇಡಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತವೆ ಏಕೆಂದರೆ ಹಲವು ಕೆಲಸಗಳನ್ನ ನೀವು ಮಾಡುತ್ತಿದ್ದೀರಿ ಹಾಗಾಗಿ ಸರಿಯಾದ ಸಮಯಕ್ಕೆ ಊಟ ಹಾಗೂ ನಿದ್ರೆಯನ್ನು ಮಾಡಲು ಸಾಧ್ಯವಾಗುವುದಿಲ್ಲ ಈ ಕಾರಣಕ್ಕಾಗಿ ಹಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನ ಕಾಡಲಿದೆ. ಯಾರೆಲ್ಲಾ ಶಿಕ್ಷಣ ಕ್ಷೇತ್ರದಲ್ಲಿದ್ದಾರೆ ಅವರಿಗೆ ಕಲೆ ನಟನೆ ಮುಂತಾದ ಕ್ಷೇತ್ರಗಳಲ್ಲಿ ಮುನ್ನಡೆ ಉಂಟಾಗುತ್ತದೆ ನಿಮ್ಮ ಶಿಕ್ಷಣದ ಬಗ್ಗೆ ಗಮನ ವಹಿಸಿ ಕಷ್ಟಪಟ್ಟು ಓದಿ ಖಂಡಿತ ಒಳ್ಳೆಯದಾಗಲಿದೆ.
ಕೃತಿಕಾ ನಕ್ಷತ್ರ ಹೆಸರುಗಳು
ಕೃತಿಕ ನಕ್ಷತ್ರದ ಸ್ತ್ರೀ ಪುರುಷರ ಗುಣಲಕ್ಷಣಗಳು ಹೀಗಿವೆ ಮೇಷ ವೃಷಭ ರಾಶಿ ಚಕ್ರ ಚಿಹ್ನೆಗಳಾಗಿವೆ, ಲಿಂಗ ಹೆಣ್ಣು ಆಡಳಿತ ಗ್ರಹ ನಮ್ಮ ಸೂರ್ಯ, ಚರಣ ರಾಶಿ ಮಕರ ಮೀನಾ ಹಾಗೂ ಕುಂಭ, ಕಾಮಪುರುಷಾರ್ಥ ಹೊಂದಿದ್ದಾರೆ ಹಾಗೂ ರಾಕ್ಷಸಗಣ ಇವರದಾಗಿದೆ ಇವರ ಅದೃಷ್ಟ ಬಣ್ಣ ಬಿಳಿ ಹಾಗೂ ನವಿಲು ಹಕ್ಕಿಯಾಗಿದೆ ಹಾಗೂ ಇವರ ಅದೃಷ್ಟ ಪ್ರಾಣಿ ಹೆಣ್ಣು ಕುರಿ. ಕೃತಿಕಾ ನಕ್ಷತ್ರದವರು ಆಶಾವಾದಿಗಳಾಗಿರುತ್ತಾರೆ, ಸಲಹೆಗಳನ್ನ ಪಡೆದುಕೊಳ್ಳುತ್ತಾರೆ ಹಾಗಾಗಿ ಹಲವು ಸಮಸ್ಯೆಗಳಿಗೆ ಒಳಗಾಗುತ್ತೀರಾ ಹೀಗಾಗಿ ಎಲ್ಲಾ ಜನರು ನೀಡುವ ಸಲಹೆಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಹೋಗದಿರಿ ನಿಮ್ಮದೇ ಆದ ಎಕ್ಸ್ಪೀರಿಯನ್ಸ್ ಅನ್ನ ಬಳಸಿಕೊಂಡು ಜೀವನವನ್ನ ಮುನ್ನಡೆಸಿ ಏನೆಲ್ಲ ತೊಂದರೆಗಳು ಉಂಟಾದಾಗ ವಿಮರ್ಶೆ ಮಾಡಿ ಎಲ್ಲಿ ನಾನು ತಪ್ಪು ಮಾಡಿದೆ ಆ ಕಾರಣಕ್ಕೆ ತೊಂದರೆ ಉಂಟಾಯಿತು ಎಂಬುದನ್ನು ವಿಶ್ಲೇಷಣೆ ಮಾಡಿ ಮುಂದುವರೆದರೆ ಖಂಡಿತ ಒಳ್ಳೆಯದಾಗುತ್ತೆ ಯಾರೆಲ್ಲಾ ಶಿಕ್ಷಣ ನಡೆಸುತ್ತಿದ್ದಾರೆ ಹಾಗೂ ಸ್ವತಃ ವ್ಯಾಪಾರವನ್ನು ಮಾಡಿಸುತ್ತಿದ್ದರೆ ಅವರಿಗೆ ಅವರ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ ಸಾಕಷ್ಟು ದೊಡ್ಡ ಹೆಸರು ಮಾಡಲು ನೀವು ಸಮರ್ಥರಿದ್ದೀರಿ ಹಾಗಾಗಿ ಖಂಡಿತ ಮುಂದೆ ಒಂದು ದಿನ ಒಳ್ಳೆಯ ಕೀರ್ತಿ ಹಾಗೂ ಸಂಪತ್ತನ್ನು ಪಡೆಯುತ್ತೀರಿ ಪಾದರಸದ ರೀತಿ ಯಾವಾಗಲೂ ಚುರುಕುತನದಿಂದ ಕೆಲಸವನ್ನು ಮಾಡುತ್ತಿರುವ ಕಾರಣದಿಂದಾಗಿ ನೀವು ಕೈಗೊಂಡ ಎಲ್ಲಾ ಕೆಲಸದಲ್ಲೂ ಸಾರ್ಥಕತೆಯನ್ನು ಪಡೆಯುತ್ತಿದ್ದೀರಿ ಸಾರ್ವಜನಿಕ ಜೀವನವು ತುಂಬಾ ಚೆನ್ನಾಗಿರುತ್ತೆ. ಸಂಗೀತಪ್ರಿಯರು ಹಾಗೂ ಕಲೆಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿಕೊಳ್ಳಿ ಈ ಕ್ಷೇತ್ರದಲ್ಲಿ ಖಂಡಿತ ನೀವು ಪ್ರಗತಿಯನ್ನು ಕಾಣಲಿದ್ದೀರಿ.
ರೋಹಿಣಿ ನಕ್ಷತ್ರ ಹೆಸರುಗಳು
ರೋಹಿಣಿ ನಕ್ಷತ್ರದ ಸ್ತ್ರೀ ಪುರುಷ ಗುಣಲಕ್ಷಣಗಳು ಹೀಗಿವೆ ನಿಮ್ಮ ರಾಶಿ ಚಕ್ರ ಚಿಹ್ನೆ ವೃಷಭ ರಾಶಿ, ನಿಮ್ಮ ದೇವತೆ ಬ್ರಹ್ಮ ಹಾಗೂ ಅದೃಷ್ಟ ಚಿನ್ಹೆ ರಥವನ್ನು ಎಳೆಯುವ ಹಸು ಮನುಷ್ಯ ಗಣವನ್ನ ಹೊಂದಿದ್ದೀರಾ ನಿಮ್ಮ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಪ್ರಾಣಿ ಹಾವು ಹಾಗೂ ಪಕ್ಷಿ ಬಿಳಿ ಗೂಬಿ. ನಿಮ್ಮ ಮುಖದಲ್ಲಿ ತುಂಬಾ ಕ್ರಾಂತಿ ಹೊಂದಿರುತ್ತೆ ದೇಹ ಸಿಮ್ ಆಗಿರುವ ಕಾರಣ ಎಲ್ಲಾ ಕೆಲಸವನ್ನು ತುಂಬಾ ಕ್ರಿಯಾತ್ಮಕವಾಗಿ ಮಾಡುತ್ತೀರಾ ಪ್ರಕೃತಿ ಪ್ರೇಮಿ ಆಗಿರುವ ನೀವು ಹಲವಾರು ಪ್ರಕೃತಿ ಉಳಿಸುವ ಕಾರ್ಯಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುತ್ತೀರಾ ಹೆಚ್ಚಿನವರು ಕಲೆಯನ್ನು ಇಷ್ಟಪಡುತ್ತಾರೆ ಹಾಗಾಗಿ ನಿಮ್ಮ ಜೀವನ ತುಂಬಾ ಸರಳವಾಗಿರುತ್ತೆ ನೇರವಾಗಿ ಹೆಚ್ಚು ನೀವು ಮಾತನಾಡುವ ಕಾರಣದಿಂದಾಗಿ ಹಲವು ಜನರು ನಿಷ್ಟೂರ ಗೊಳ್ಳುತ್ತಾರೆ ಮಾತನಾಡುವುದಕ್ಕಿಂತ ಮುಂಚೆ ಸ್ವಲ್ಪ ಯೋಚಿಸಿ ಮಾತನಾಡಿ ನಿಮ್ಮ ಕುಟುಂಬದಲ್ಲಿ ನೆಮ್ಮದಿ ನೆಲೆಯು ಇರುತ್ತೆ ಯಾವಾಗಲೂ ಸೃಜನಶೀಲತೆಯಿಂದ ಕೆಲಸ ಕಾರ್ಯಗಳನ್ನು ನೀವು ಮಾಡುತಿದ್ದೀರಾ ಹಾಗಾಗಿ ನಿಮ್ಮ ಕೆಲಸದಲ್ಲಿ ಆನಂದ ಹಾಗೂ ತೃಪ್ತಿ ಕಾಣಲಿದ್ದೀರಿ. ಹೆಚ್ಚು ಹೊಸ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರುತ್ತಿವೆ ಹಾಗಾಗಿ ಯಾವಾಗಲೂ ಜಾಗರೂಕತೆಯಿಂದ ಕೆಲಸವನ್ನು ಮಾಡಿ ಯಾವುದೇ ಕೆಲಸವನ್ನು ಮಾಡುವ ಮುಂಚೆ ಹಲವು ಬಾರಿ ಯೋಚಿಸಿ ಹಾಗೂ ಸರಿಯಾದ ಪ್ಲಾನ್ ನ ಮುಖಾಂತರ ಮುಂದುವರೆದರೆ ಖಂಡಿತ ಒಳ್ಳೆಯದಾಗುತ್ತೆ. ಕೆಲವು ವರ್ಷಗಳ ಹಿಂದೆ ನಡೆದ ಕೆಟ್ಟ ಘಟನೆಗಳು ನಿಮ್ಮನ್ನ ಕಾಡುತ್ತಿವೆ ಅವುಗಳನ್ನ ಮರೆಯಲು ಜಪತಪಗಳನ್ನ ಮಾಡಿ ಆದಷ್ಟು ದೇವರ ಮೇಲೆ ನಂಬಿಕೆ ಇಟ್ಟು ಕೆಲಸವನ್ನು ಮುಂದುವರಿಸಿದರೆ ಖಂಡಿತ ಯಶಸ್ಸು ನಿಮ್ಮದಾಗಲಿದೆ.