ಉಚಿತ ಮದುವೆ ಪ್ರೊಫೈಲ್ ಗಳು
ಇತ್ತೀಚಿನ ದಿನದಲ್ಲಿ ವಧು-ವರರ ಪ್ರೊಫೈಲ್ ಹುಡುಕುವುದೇ ತುಂಬಾ ಕಷ್ಟ ಏಕೆಂದರೆ ಹಲವು ಬ್ರೋಕರ್ಗಳು ಹಣದ ಉದ್ದೇಶದಿಂದ ನಾನಾ ರೀತಿಯ ಸುಳ್ಳು ಹೇಳಿ ಪ್ರೊಫೈಲ್ಗಳನ್ನು ನೀಡುತ್ತಾರೆ ಜೊತೆಗೆ ಮದುವೆ ಮಾಡಲು ಪ್ರಯತ್ನ ಪಡುತ್ತಾರೆ ಇದರಿಂದಾಗಿಯೇ ಇತ್ತೀಚಿನ ದಿನದಲ್ಲಿ ಮದುವೆಯಾದ ಕೆಲವೇ ದಿನದಲ್ಲಿ ಮದುವೆ ಮುರಿದು ಬಿದ್ದಿವೆ ಈ ಕಾರಣಕ್ಕಾಗಿ ನಮ್ಮಲ್ಲಿ ರಿಜಿಸ್ಟರ್ ಆಗುವ ಎಲ್ಲಾ ಪ್ರೊಫೈಲ್ಗಳನ್ನು ಉಚಿತವಾಗಿ ಈ ಕೆಳಗೆ ಅಪ್ಲೋಡ್ ಮಾಡಲಾಗುತ್ತೆ ಡೌನ್ಲೋಡ್ ಮಾಡಿಕೊಳ್ಳಿ ಪ್ರತಿದಿನ ತಪ್ಪದೆ.
ಹಲವು ವರ್ಷಗಳಿಂದ ಎಷ್ಟೇ ಪ್ರಯತ್ನ ಪಟ್ಟರು ವಧು-ವರರ ಪ್ರೊಫೈಲ್ಗಳನ್ನು ಹುಡುಕುವುದೇ ತುಂಬಾ ಕಷ್ಟದ ಕೆಲಸವಾಗಿದೆ ಇದಕ್ಕೆ ಮುಖ್ಯ ಕಾರಣ ಎಲ್ಲರೂ ವಿದ್ಯಾವಂತರಾಗಿದ್ದಾರೆ ಒಬ್ಬರ ಮಾತನ್ನ ಇನ್ನೊಬ್ಬರು ಕೇಳೋದಿಲ್ಲ ಮದುವೆಯಾಗುವ ಹುಡುಗ ಅಥವಾ ಹುಡುಗಿ ಓದಿರಬೇಕು ಕೆಲಸ ಮಾಡುತ್ತಿದ್ದರೆ salary ಹೆಚ್ಚಾಗಿರಬೇಕು ನಮ್ಮ ಹುಡುಗನನ್ನ ತುಂಬಾ ಖರ್ಚು ಮಾಡಿ ಓದಿಸಿದ್ದೇವೆ ಹಾಗಾಗಿ ವಿದ್ಯಾವಂತೆ MNC ಕೆಲಸಕ್ಕೆ ಹೋಗುತ್ತಿರುವ ಹುಡುಗಿಯ ಬೇಕು ಎಂದು ಹುಡುಗನ ಮನೆ ಕಡೆಯವರು ಹುಡುಕುತ್ತಾರೆ.
ಹುಡುಗಿಯರ ಮನೆಯಲ್ಲಿ ಕೂಡ ಹುಡುಗ ವಿದ್ಯಾವಂತನಾಗಿದ್ದು MNC ಕಂಪನಿಯಲ್ಲಿ ಕೆಲಸ ಮಾಡಬೇಕು ಸ್ಯಾಲರಿ ಕೂಡ ಹೆಚ್ಚಾಗಿ ಇರಬೇಕು ಹುಡುಗನ ಮನೆಯಲ್ಲಿ ತಂದೆ ತಾಯಿಗಳು ಜೊತೆಯಲ್ಲಿ ಇರಬಾರದು ಎಂಬ ವಿಷಯವನ್ನ ಮನದಲ್ಲಿ ಇಟ್ಟುಕೊಂಡು ಹುಡುಗ ಹುಡುಕುತ್ತಾರೆ ಈ ಕಾರಣದಿಂದಾಗಿಯೇ ಎಷ್ಟೇ ಪ್ರಯತ್ನ ಪಟ್ಟರು ಮದುವೆಯಾಗದೆ ತುಂಬಾ ವರ್ಷಗಳ ಕಾಲ ಹಾಗೆ ಉಳಿಯುತ್ತಾರೆ. ಬಹಳಷ್ಟು ಜನರು ಹುಡುಗ ಹುಡುಗಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಅರಿತು ಮದುವೆ ಆಗಬೇಕು ಎಂಬುದನ್ನ ಗಮನಿಸದೆ ಕೇವಲ ಆಸ್ತಿ ದುಡ್ಡು ವಿದ್ಯಾಭ್ಯಾಸ ಹಾಗೂ ಕೆಲಸ ನೋಡಿ ಮದುವೆ ಮಾಡುತ್ತಾರೆ ಈ ಕಾರಣದಿಂದಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ಹೊಂದಾಣಿಕೆ ಆಗದೆ ಬೇರ್ಪಡುವ ಸಂದರ್ಭ ಬಂದುದಾಗುತ್ತದೆ ಇದಕ್ಕೆಲ್ಲ ಮುಖ್ಯ ಕಾರಣ ಅನುಸರಿಸಿಕೊಂಡು ಹೋಗದೆ ಇರುವುದು ಹಾಗೂ ಕಷ್ಟ ಬಂದಾಗ ಒಬ್ಬರಿಗೊಬ್ಬರು ಸಹಾಯ ಮಾಡಿ ಮುಂದುವರಿಯದೆ ಇರುವುದು ಇದಕ್ಕೆಲ್ಲ ಮುಖ್ಯ ಕಾರಣ ಆಗಿದೆ.
ವಧು ವರರ ತಂದೆ ತಾಯಿ ಜಾತಕ ನೋಡಿ ಮದುವೆ ಮಾಡಿ ಬಿಡುತ್ತಾರೆ ಹುಡುಗ ಹುಡುಗಿ ಯಾವ ಮನಸ್ಥಿತಿ ಇಟ್ಟುಕೊಂಡಿದ್ದಾರೆ ಎಂಬುದನ್ನೇ ಗಮನಿಸದೇ ಮದುವೆ ಮಾಡುವುದು ಎಷ್ಟು ಸರಿ ಹೇಳಿ ಹುಡುಗ ಹುಡುಗಿ ಒಬ್ಬರನ್ನೊಬ್ಬರು ಅರಿತು ಜೀವನ ನಡೆಸದೆ ಇರುವುದೇ ಇದಕ್ಕೆ ಬಹು ಮುಖ್ಯ ಕಾರಣವಾಗಿದೆ.
ಮನಸ್ಥಿತಿಗಳು ಒಂದೇ ಆಗಿರುತ್ತದೆ ಆದರೆ ಜಾತಕ ಕುಡಿ ಬರುವುದಿಲ್ಲ ವಧು ವರರಲ್ಲಿ ಈ ಕಾರಣಕ್ಕಾಗಿ ಮದುವೆ ನಡೆಯುವುದಿಲ್ಲ ಮುಖ್ಯ ಅಂಶವಾಗಿದೆ, ಮದುವೆ ಸ್ಥಿರವಾಗಿ ನಿಲ್ಲಬೇಕೆಂದರೆ ಬಹು ಮುಖ್ಯವಾಗಿ ಬೇಕಾಗಿರುವುದು ಮನಸ್ಥಿತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದು, ಕಷ್ಟದ ಸಮಯದಲ್ಲಿ ನೆರವಾಗುವುದು ಅದನ್ನು ಬಿಟ್ಟು ಬರೀ ಸುಖದಲ್ಲೇ ಜೀವನ ನಡೆಸಬೇಕು ಕಷ್ಟಗಳು ಬರಬಾರದು ಕಷ್ಟಗಳು ಬಂದಾಗ ಒಬ್ಬರನ್ನೊಬ್ಬರು ಬೈದಾಡುಕೊಳ್ಳುವುದು ಈ ರೀತಿ ಮಾಡುವುದರಿಂದ ಮದುವೆಗಳು ಹಲವು ಬಾರಿ ಮುರಿದುಬಿಡುತ್ತದೆ ಈ ಕಾರಣಕ್ಕಾಗಿ ಮದುವೆ ಆಗುವುದಕ್ಕಿಂತ ಮುಂಚೆ ವಧು-ವರರು ಕುಳಿತು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವುದು ತುಂಬಾ ಅವಶ್ಯ.
